ದೇರಳಕಟ್ಟೆ: ಬೆಳ್ಮ ಗ್ರಾಮ ವ್ಯಾಪ್ತಿಯಲ್ಲಿ ಸುಮಾರು 700 ವರ್ಷಗಳ ಇತಿಹಾಸವಿರುವ ರೆಂಜಾಡಿಯ ಕೇಂದ್ರ ಜುಮಾ ಮಸ್ಜಿದ್ ಇದರ ವಠಾರದಲ್ಲಿ ಅಂತ್ಯ ವಿಶ್ರಾಂತಗೊಂಡಿರುವ ಅಸ್ಸಯ್ಯಿದ್ ಅಬೂಸ್ವಾಲಿಹ್ ವಲಿಯುಲ್ಲಾಹಿ (ಖ.ಸಿ) ರವರ ಮಖಾಂ ಉರೂಸ್, ಸ್ವಲಾತ್ ಮಜ್ಲಿಸಿನ 12ನೇ ವಾರ್ಷಿಕೋತ್ಸವ ಮತ್ತು 5 ದಿನಗಳ ಧಾರ್ಮಿಕ ಪ್ರವಚನವು ಜಮಾಅತ್ ಅಧ್ಯಕ್ಷರಾದ ಜನಾಬ್ ಬಿ.ಆರ್. ಮುಹಮ್ಮದ್ ಹನೀಫ್ ಮಲಾರ್ ಇವರ ಅಧ್ಯಕ್ಷತೆಯಲ್ಲಿ ಫೆಬ್ರವರಿ 5 ರಿಂದ ನಡೆಯಲಿದೆ.
ಕಾರ್ಯಕ್ರಮದಲ್ಲಿ ದಿನಾಂಕ 5 ರಂದು ಅಸ್ಸಯ್ಯಿದ್ ಶಿಹಾಬುದ್ದೀನ್ ಕೋಯ ತಂಙಳ್ ಅಲ್ ಹೈದ್ರೂಸಿ ಅಂದ್ರೋತಿ ಇವರ ಪ್ರಾಥನೆ ಮತ್ತು ಪ್ರಮುಖ ವಿದ್ವಾಂಸರಾದ ರಾಫಿ ಅಹ್ಸನಿ ಕಾಂತಪುರಂ ಇವರ ಮತ ಪ್ರವಚನ ನಡೆಯಲಿದೆ, ನಂತರ 6,7,8 ಮತ್ತು 9 ದಿನಾಂಕಗಳಲ್ಲಿ ಕ್ರಮವಾಗಿ ಇ.ಪಿ. ಅಬೂಬಕ್ಕರ್ ಖಾಸಿಮಿ, ಉಸ್ಮಾನ್ ಜೌಹರಿ ನೆಲ್ಯಾಡಿ, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಮತ್ತು ಅಲ್ ಹಾಜ್ ಎನ್.ಎಚ್.ಆದಂ ಫೈಝಿ ರೆಂಜಾಡಿ ಇವರ ಮತ ಪ್ರವಚನ ನಡೆಯಲಿದೆ.
ದಿನಾಂಕ 10 ರಂದು ಲುಹರ್ ನಮಾಝಿನ ಬಳಿಕ (ಮಧ್ಯಾಹ್ನ) ಮೌಲೂದ್ ಮಜ್ಲಿಸ್ ನಂತರ ಅಸರ್ ನಮಾಝಿನ ಬಳಿಕ ಅಸ್ಸಯ್ಯಿದ್ ಮುಹಮ್ಮದ್ ಶಾಫಿ ಪೂಕೋಯ ತಂಙಳ್ ಹೈದ್ರೂಸಿ ವಯನಾಡ್ ಮತ್ತು ಮಿತ್ತಬೈಲ್ ಜಬ್ಬಾರ್ ಉಸ್ತಾದರ ಸುಪುತ್ರ ಇರ್ಷಾದ್ ದಾರಿಮಿ ಮಿತ್ತಬೈಲ್ ಇವರ ಗಣ್ಯ ನೇತ್ರತ್ವದಲ್ಲಿ ಮಖಾಂ ಕೂಟು ಝಿಯಾರತ್ ಮತ್ತು ಇಶಾ ನಮಾಝಿನ ಬಳಿಕ ಅಸ್ಸಯ್ಯಿದ್ ಶಿಹಾಬುದ್ದೀನ್ ಹೈದ್ರೂಸ್ ತಂಙಳ್ ಕಿಲ್ಲೂರು ಇವರ ನೇತ್ರತ್ವದಲ್ಲಿ ಬ್ರಹತ್ ಸ್ವಲಾತ್ ಮಜ್ಲಿಸ್ ನಡೆಯಲಿದೆ.
renjady uroos

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ