ದೇರಳಕಟ್ಟೆ : ಬೆಳ್ಮ ಗ್ರಾಮ ವ್ಯಾಪ್ತಿಯ ಕಲ್ಪಾದೆ ಎಂಬಲ್ಲಿ ಕಳೆದ ಮೂವತ್ತು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಮುಹಿಯದ್ದೀನ್ ಜುಮಾ ಮಸ್ಜಿದ್ ಹಾಗೂ ನೂರುಲ್ ಹುದಾ ಮದರಸ ಇದರ ವತಿಯಿಂದ ನಿರ್ಮಾಣವಾಗಲಿರುವ ನೂತನ ವಸತಿ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ಶುಕ್ರವಾರದಂದು ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರ ಇವರ ಪುಣ್ಯ ಹಸ್ತದಿಂದ ಜನಾಬ್ ಹೈದರ್ ಪರ್ತಿಪ್ಪಾಡಿ ಇವರ ಅದ್ಯಕ್ಷತೆಯಲ್ಲಿ ನಡೆಯಿತು
ಕಾರ್ಯಕ್ರಮದಲ್ಲಿ ಸ್ಥಳೀಯ ಖತೀಬರಾದ ಬಹುಮಾನ್ಯ ಶರಫುದ್ದೀನ್ ಫಾಳಿಲಿ ಮಲಪ್ಪುರಂ,ಮಸೀದಿ ಅಧ್ಯಕ್ಷರಾದ ಜನಾಬ್ ಅಬ್ದುಲ್ ರಝಾಕ್, ಕಾರ್ಯದರ್ಶಿ ಮುಹಮ್ಮದ್ ಫಯಾಝ್, ಸದರ್ ಮುಅಲ್ಲಿಂ ಬಹುಮಾನ್ಯ ಹನೀಫ್ ನಿಝಾಮಿ ಅಸೈ, ಮುಅಝ್ಜಿನ್ ಬಹುಮಾನ್ಯ ರಿಯಾಝ್ ಬಾಹಸನಿ, ಮಸೀದಿ ಗೌರಾವಾದ್ಯಕ್ಷರಾದ ಜನಾಬ್ ಅಬ್ದುಲ್ ಸತ್ತಾರ್, ಉಪಾಧ್ಯಕ್ಷರಾದ ಕೆರೀಂ.ಎಫ್,ಮದ್ರಸ ಉಸ್ತುವಾರಿ ಅಬೂಬಕ್ಕರ್ ಪಾಸ್ಪಾಡಿ,ಕೋಶಾಧಿಕಾರಿ ಅಬ್ಬಾಸ್ ಬಿ.ಎಚ್. ಮುಂತಾದ ಹಲವು ಗಣ್ಯರು ಉಪಸ್ಥಿತರಿದ್ದರು
ನೂತನವಾಗಿ ನಿರ್ಮಾಣವಾಗಲಿರುವ ವಸತಿ ಸಮುಚ್ಚಯ
ಶಿಲಾನ್ಯಾಸ ಕಾರ್ಯಕ್ರಮದ ಕೆಲವು ಕ್ಷಣಗಳು
ಜಮಾಅತ್ ವ್ಯಾಪ್ತಿಯಲ್ಲಿ ಸುಮಾರು ಎಂಬತ್ತರಷ್ಟು ಮನೆಗಳಿದ್ದು, ಮದರಸದಲ್ಲಿ ಸುಮಾರು ನೂರರಷ್ಟು ವಿದ್ಯಾರ್ಥಿಗಳು ಕಲಿಯುತಿದ್ದು,ಮೂರು ಉಸ್ತಾದರುಗಳು ಸೇವೆ ಸಲ್ಲಿಸುತಿದ್ದಾರೆ,ಹತ್ತಾರು ವಿದ್ಯಾರ್ಥಿಗಳು ಕರ್ನಾಟಕ, ಕೇರಳದ ಪ್ರಮುಖ ವಿದ್ಯಾಬ್ಯಾಸ ಕೇಂದ್ರಗಳಲ್ಲಿ ದರ್ಸ್ ವಿದ್ಯಾಬ್ಯಾಸ ನಡೆಸುತ್ತಿದ್ದಾರೆ. ಮಸೀದಿಯ ವರಮಾನದ ಉದ್ದೇಶದಿಂದ ನಿರ್ಮಾಣವಾಗುತ್ತಿರುವ ಈ ಕಟ್ಟಡಕ್ಕೆ ಊರ ಪರವೂರಿನವರು ತನು,ಮನ,ಧನಗಳಿಂದ ಸಹಾಯಾಡಿದ್ದು ಇನ್ನಷ್ಟು ಸಹಾಯದ ಆವಶ್ಯಕತೆ ಇದ್ದು ಸರ್ವರ ಸಹಕಾರದ ನಿರೀಕ್ಷೆ ಜಮಾಅತ್ ಸಮಿತಿಗೆ ಇದೆ.
ನೂತನವಾಗಿ ನಿರ್ಮಾಣವಾಗಲಿರುವ ವಸತಿ ಸಮುಚ್ಚಯ
ಶಿಲಾನ್ಯಾಸ ಕಾರ್ಯಕ್ರಮದ ಕೆಲವು ಕ್ಷಣಗಳು






Masha allah
ಪ್ರತ್ಯುತ್ತರಅಳಿಸಿMasha allah
ಪ್ರತ್ಯುತ್ತರಅಳಿಸಿ