ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ 5 ರಿಂದ ಬೆಳ್ಮರೆಂಜಾಡಿ ಮಖಾಂ ಉರೂಸ್

ದೇರಳಕಟ್ಟೆ: ಬೆಳ್ಮ ಗ್ರಾಮ ವ್ಯಾಪ್ತಿಯಲ್ಲಿ ಸುಮಾರು 700 ವರ್ಷಗಳ ಇತಿಹಾಸವಿರುವ ರೆಂಜಾಡಿಯ ಕೇಂದ್ರ ಜುಮಾ ಮಸ್ಜಿದ್ ಇದರ ವಠಾರದಲ್ಲಿ ಅಂತ್ಯ ವಿಶ್ರಾಂತಗೊಂಡಿರುವ ಅಸ್ಸಯ್ಯಿದ್ ಅಬೂಸ್ವಾಲಿಹ್ ವಲಿಯುಲ್ಲಾಹಿ (ಖ.ಸಿ) ರವರ ಮಖಾಂ ಉರೂಸ್, ಸ್ವಲಾತ್ ಮಜ್ಲಿಸಿನ 12ನೇ ವಾರ್ಷಿಕೋತ್ಸವ ಮತ್ತು 5 ದಿನಗಳ ಧಾರ್ಮಿಕ ಪ್ರವಚನವು  ಜಮಾಅತ್ ಅಧ್ಯಕ್ಷರಾದ ಜನಾಬ್ ಬಿ.ಆರ್. ಮುಹಮ್ಮದ್ ಹನೀಫ್ ಮಲಾರ್ ಇವರ ಅಧ್ಯಕ್ಷತೆಯಲ್ಲಿ ಫೆಬ್ರವರಿ 5 ರಿಂದ ನಡೆಯಲಿದೆ.    ಕಾರ್ಯಕ್ರಮದಲ್ಲಿ ದಿನಾಂಕ 5 ರಂದು ಅಸ್ಸಯ್ಯಿದ್ ಶಿಹಾಬುದ್ದೀನ್ ಕೋಯ ತಂಙಳ್ ಅಲ್ ಹೈದ್ರೂಸಿ ಅಂದ್ರೋತಿ ಇವರ ಪ್ರಾಥನೆ ಮತ್ತು ಪ್ರಮುಖ ವಿದ್ವಾಂಸರಾದ ರಾಫಿ ಅಹ್ಸನಿ ಕಾಂತಪುರಂ ಇವರ ಮತ ಪ್ರವಚನ ನಡೆಯಲಿದೆ, ನಂತರ 6,7,8 ಮತ್ತು 9 ದಿನಾಂಕಗಳಲ್ಲಿ ಕ್ರಮವಾಗಿ ಇ.ಪಿ. ಅಬೂಬಕ್ಕರ್ ಖಾಸಿಮಿ, ಉಸ್ಮಾನ್ ಜೌಹರಿ ನೆಲ್ಯಾಡಿ, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಮತ್ತು ಅಲ್ ಹಾಜ್ ಎನ್.ಎಚ್.ಆದಂ ಫೈಝಿ ರೆಂಜಾಡಿ ಇವರ ಮತ ಪ್ರವಚನ ನಡೆಯಲಿದೆ.      ದಿನಾಂಕ 10 ರಂದು ಲುಹರ್ ನಮಾಝಿನ ಬಳಿಕ (ಮಧ್ಯಾಹ್ನ) ಮೌಲೂದ್ ಮಜ್ಲಿಸ್ ನಂತರ ಅಸರ್ ನಮಾಝಿನ ಬಳಿಕ ಅಸ್ಸಯ್ಯಿದ್ ಮುಹಮ್ಮದ್ ಶಾಫಿ ಪೂಕೋಯ ತಂಙಳ್ ಹೈದ್ರೂಸಿ ವಯನಾಡ್ ಮತ್ತು ಮಿತ್ತಬೈಲ್ ಜಬ್ಬಾರ್ ಉಸ್ತಾದರ ಸುಪುತ್ರ ಇರ್ಷಾದ್ ದಾರಿಮಿ ಮಿತ್ತಬೈಲ್ ಇವರ ಗಣ್ಯ ನೇತ್ರತ್ವದಲ್ಲಿ ಮಖಾಂ ಕೂಟು ಝಿಯಾರತ್ ಮತ್ತು ಇಶಾ ...
ಇತ್ತೀಚಿನ ಪೋಸ್ಟ್‌ಗಳು

ಕಲ್ಪಾದೆ ವಸತಿ ಸಮುಚ್ಚಯಕ್ಕೆ ಸಯ್ಯದ್ ಕೂರ ತಂಙಳರಿಂದ ಶಿಲಾನ್ಯಾಸ

ದೇರಳಕಟ್ಟೆ : ಬೆಳ್ಮ ಗ್ರಾಮ ವ್ಯಾಪ್ತಿಯ ಕಲ್ಪಾದೆ ಎಂಬಲ್ಲಿ ಕಳೆದ ಮೂವತ್ತು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಮುಹಿಯದ್ದೀನ್ ಜುಮಾ ಮಸ್ಜಿದ್ ಹಾಗೂ ನೂರುಲ್ ಹುದಾ ಮದರಸ ಇದರ ವತಿಯಿಂದ ನಿರ್ಮಾಣವಾಗಲಿರುವ ನೂತನ ವಸತಿ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ಶುಕ್ರವಾರದಂದು ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರ ಇವರ ಪುಣ್ಯ ಹಸ್ತದಿಂದ ಜನಾಬ್ ಹೈದರ್ ಪರ್ತಿಪ್ಪಾಡಿ ಇವರ ಅದ್ಯಕ್ಷತೆಯಲ್ಲಿ ನಡೆಯಿತು       ಜಮಾಅತ್ ವ್ಯಾಪ್ತಿಯಲ್ಲಿ ಸುಮಾರು ಎಂಬತ್ತರಷ್ಟು ಮನೆಗಳಿದ್ದು, ಮದರಸದಲ್ಲಿ ಸುಮಾರು ನೂರರಷ್ಟು ವಿದ್ಯಾರ್ಥಿಗಳು ಕಲಿಯುತಿದ್ದು,ಮೂರು ಉಸ್ತಾದರುಗಳು ಸೇವೆ ಸಲ್ಲಿಸುತಿದ್ದಾರೆ,ಹತ್ತಾರು ವಿದ್ಯಾರ್ಥಿಗಳು ಕರ್ನಾಟಕ, ಕೇರಳದ ಪ್ರಮುಖ ವಿದ್ಯಾಬ್ಯಾಸ ಕೇಂದ್ರಗಳಲ್ಲಿ ದರ್ಸ್ ವಿದ್ಯಾಬ್ಯಾಸ ನಡೆಸುತ್ತಿದ್ದಾರೆ. ಮಸೀದಿಯ ವರಮಾನದ ಉದ್ದೇಶದಿಂದ ನಿರ್ಮಾಣವಾಗುತ್ತಿರುವ ಈ ಕಟ್ಟಡಕ್ಕೆ ಊರ ಪರವೂರಿನವರು ತನು,ಮನ,ಧನಗಳಿಂದ ಸಹಾಯಾಡಿದ್ದು ಇನ್ನಷ್ಟು ಸಹಾಯದ ಆವಶ್ಯಕತೆ ಇದ್ದು ಸರ್ವರ ಸಹಕಾರದ ನಿರೀಕ್ಷೆ ಜಮಾಅತ್ ಸಮಿತಿಗೆ ಇದೆ.         ಕಾರ್ಯಕ್ರಮದಲ್ಲಿ ಸ್ಥಳೀಯ ಖತೀಬರಾದ ಬಹುಮಾನ್ಯ ಶರಫುದ್ದೀನ್ ಫಾಳಿಲಿ ಮಲಪ್ಪುರಂ,ಮಸೀದಿ ಅಧ್ಯಕ್ಷರಾದ ಜನಾಬ್ ಅಬ್ದುಲ್ ರಝಾಕ್, ಕಾರ್ಯದರ್ಶಿ ಮುಹಮ್ಮದ್ ಫಯಾಝ್, ಸದರ್ ಮುಅಲ್ಲಿಂ ಬಹುಮಾನ್ಯ ಹನೀಫ್ ನಿಝಾಮಿ ಅಸೈ, ಮುಅಝ್ಜಿನ್ ಬಹುಮಾನ್ಯ ರಿಯಾಝ್ ಬಾಹಸನಿ, ಮಸ...